ಮಡಿವಾಳ ಮಾಚಿದೇವರ ಸಂಪೂರ್ಣ ವಚನಗಳು

मदिवाला माचिदेवरा पूरा वचन संग्रह - मदिवाला माचिदेवरा वचन

Contains ads

50+

Total Global Downloads
  • Bundle ID

    kannada.vachana.madivala.maachidevaru
  • Developer

    Vishaya Kannada
  • Category

    Books & Reference
  • Price

    Free
  • Update Time

    Oct 27, 2024
  • 0 Ratings

    0
  • Bundle ID

    kannada.vachana.madivala.maachidevaru
  • Developer

    Vishaya Kannada
  • category

    Books & Reference
  • Price

    Free
  • Update Time

    Oct 27, 2024
  • 0 Ratings

    0

Screenshots & Media

App Info

Description

ಮಡಿವಾಳ ಮಾಚಿದೇವರ ಸಂಪೂರ್ಣ ವಚನಗಳನ್ನ ಸಂಗ್ರಹಿಸಿ ನೀಡಲಾಗಿದೆ.
ಮಡಿವಾಳ ಮಾಚಿದೇವ - ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ - ಸುಜ್ನಾನವ್ವ ದಂಪತಿಗಳ ಪುತ್ರ ರತ್ನ ಮಡಿವಾಳ ಮಾಚಿದೆವರು. ದೇವರ ಹಿಪ್ಪರಿಗೆ ಈತನ ಜನ್ಮಸ್ಥಳ. ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಈತನನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವನಿಗೆ ಎಡೆ ಲಭಿಸಿದೆ. ಶರಣರ ಬಟ್ಟೆಗಳನ್ನು ತೊಳೆಯುವುದು ಈತನ ಕಾಯಕ. ಮಡಿವಾಳನಾಗಿ ಮಾಚಯ್ಯ ಹುಟ್ಟಿದಕ್ಕೂ ಕಾರಣವಿದೆ. ಪುರಾಣಗಳ ಪ್ರಕಾರ ಶಿವನ ಆಜ್ಞೆಯಂತೆ ದಕ್ಷ ಪ್ರಜಾಪತಿಯ ಸಂಹಾರ ಮಾಡಿ ಅತ್ಯಂತ ಉತ್ಸಾಹದಿಂದ ವೀರಭದ್ರನು ಶಿವನನ್ನು ಕಾಣಲು ಬರುತ್ತಾನೆ. ಶಿವನ ಸಭೆಯೊಳಗೆ ಬರುವಾಗ ವೀರಭದ್ರನ ಉತ್ತರೀಯದಿಂದ ರಕ್ತದ ಬಿಂದುಗಳು ಶಿವನ ಆಸ್ಥಾನದ ಗಣಗಳಿಗೆ ತಗಲುತ್ತದೆ. ವಿಜಯದ ಉನ್ಮಾದದಲ್ಲಿದ್ದ ವೀರಭದ್ರನಿಗೆ ತನ್ನ ಬಟ್ಟೆಯಲ್ಲಿ ರಕ್ತ ಚೆಲ್ಲಿರುವುದು ಗಮನಕ್ಕೆ ಬಂದಿರುವುದಿಲ್ಲ. ಇದನ್ನು ಕಂಡ ಈಶ್ವರನು ನಿನ್ನಿಂದ ತಪ್ಪಾಗಿದೆ ವೀರಭದ್ರಾ, ನೀನು ರಕ್ತವನ್ನು ಸಭಾಸದರ ಮೇಲೆ ಚೆಲ್ಲಿ ಅವರನ್ನು ಮಲಿನ ಮಾಡಿಬಿಟ್ಟಿರುವೆ. ಈ ಪಾಪಕ್ಕಾಗಿ ನೀನು ಭೂಮಿಯಲ್ಲಿ ಮಡಿವಾಳನಾಗಿ ಜನಿಸಿ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕ ಮಾಡಬೇಕು. ಹೀಗೆ ಮಾಡುವುದರಿಂದ ನಿನ್ನ ಪಾಪವು ಕ್ರಮೇಣವಾಗಿ ಕಮ್ಮಿಯಾಗಲಿದೆ ಎಂದು ಹೇಳುತ್ತಾನೆ. ಶಿವನ ಮಾತಿನಂತೆ ವೀರಭದ್ರನು ಭೂಲೋಕದಲ್ಲಿ ಮಾಚಿದೇವನಾಗಿ ಜನಿಸುತ್ತಾನೆ. ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು 'ಮಡಿ' ಮಾಡಿ ಮುಟ್ಟಿಸುವ ಕಾಯಕ ಇವರಾದಾಗಿತ್ತು . ಮಡಿ ಬಟ್ಟೆ ಹೊತ್ತುಕೊಂಡು 'ವೀರ ಘಂಟೆ' ಬಾರಿಸುತ್ತ , ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು . 12 ನೇ ಶತಮಾನದ ಸಂತನ ಮಹಾನ್ ಯೋಧ, ಶರಣರು ಕಲ್ಯಾಣದಿಂದ ಉಳುವಿಗೆ ಹೋದಾಗ ಅವರು ಶರಣರು ಬರೆದ ವಚನಗಳ ಹಸ್ತಪ್ರತಿಗಳನ್ನು ರಕ್ಷಿಸಲು ರಾಜ ಬಿಜ್ಜಳನ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು. ಹಲವಾರು ಶಾಸನಗಳು ಅವನ ಹೆಸರನ್ನು ಉಲ್ಲೇಖಿಸುತ್ತವೆ. ಅವರ 345 ವಚನಗಳು ಕಲಿದೇವರದೇವ ಎಂಬ ಹಸ್ತಾಕ್ಷರದೊಂದಿಗೆ ದೊರೆತಿವೆ. ಮಡಿವಾಳ ಮಾಚಿದೇವರು ಗುರು ಬಸವೇಶ್ವರರ ಸಮಕಾಲೀನ ಶರಣರಾಗಿದ್ದರು. ಮಾಚಿದೇವ ಯಾ ಮಾಚಯ್ಯ ಮಡಿವಾಳ ಕುಟುಂಬದಲ್ಲಿ ಜನಿಸಿದ್ದರಿಂದ ಬಾಲ್ಯದಿಂದಲೂ ತನ್ನ ಕಾಯಕಕ್ಕೆ ನಿಷ್ಟನಾಗಿರುತ್ತಾನೆ. ಅವನಿಗೆ ತನ್ನ ಕಾಯಕವೇ ಭಕ್ತಿ. ಇದನ್ನು ಪರೀಕ್ಷಿಸಲು ಒಮ್ಮೆ ಶಿವನಿಗೆ ಮನಸ್ಸಾಗುತ್ತದೆ. ಅವನು ಜಂಗಮನ ವೇಷ ಧರಿಸಿ ಬರುತ್ತಾನೆ. ಮಾಚಯ್ಯನ ಹತ್ತಿರ ಬಂದು ನನ್ನ ಬಟ್ಟೆಗಳು ಮಲಿನವಾಗಿವೆ. ಅದನ್ನು ನಿನ್ನ ಪತ್ನಿ ಮಲ್ಲಿಗೆಮ್ಮನ ಎದೆಯನ್ನು ಬಗೆದು ಆ ನೆತ್ತರಿನಲ್ಲಿ ತೊಳೆದು ಕೊಡಬೇಕು, ಆಗಲೇ ಅದರ ಕೊಳೆ ಹೋಗುತ್ತದೆ ಅನ್ನುತ್ತಾನೆ. ಮಾಚಯ್ಯನು ತನ್ನ ಕಾಯಕವನ್ನೇ ನಂಬಿದವನು. ಪ್ರತಿಯೊಬ್ಬ ಗ್ರಾಹಕನೂ ದೇವರೇ. ಈ ಶರತ್ತಿಗೆ ಒಪ್ಪಿ ತನ್ನ ಹೆಂಡತಿ ಮಲ್ಲಿಗೆಮ್ಮನ ಹೃದಯ ಬಗೆದು ರಕ್ತದಲ್ಲಿ ಒಗೆದು ಶುಚಿ ಮಾಡಿಕೊಡುತ್ತಾನೆ. ಅವನ ಈ ಕಾಯಕ ನಿಷ್ಟೆಯನ್ನು ಗಮನಿಸಿ ಶಿವನು ಪ್ರಸನ್ನನಾಗಿ ಅವನಿಗೂ ಅವನ ಪತ್ನಿಗೂ ಆಶೀರ್ವಾದ ಮಾಡುತ್ತಾನೆ. ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಭವಿಯೋರ್ವ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ, ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಜನರು ಗೌರವಿಸುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. 'ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ' ಎಂಬುದನ್ನು ಜನಕ್ಕೆ ಸಾರಿದರು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , 'ಮಡಿ' ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ. ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು. ಇದು ಮಡಿವಾಳಯ್ಯನ 'ಅಹಂಕಾರವೆಂದು' ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟ ವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ 'ಮದೋನ್ಮತ್ತ' ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು. ಫೆಬ್ರವರಿ ೧, ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಗುತ್ತದೆ.

For any issues/concerns please contact us through https://vishaya.in website contact us form OR send email to [email protected].
All

Popular IAP

--

Version History

Version Time
3.0 Oct 27, 2024
2.0 Jul 6, 2024
1.0 Mar 26, 2023
Preparing

Ranking Trend

Download Trend

Last 7 Days Last 30 Days Last 90 Days
Customize

More by【Vishaya Kannada】